Monday, April 18, 2011

ಹೀಗಾಯ್ತಂತೆ

ನನ್ನ ಫ್ರೆಂಡ್ ಫ್ರೆಂಡ್ ಗೆ ಆದ ಫಜೀತಿ ಇದು. ಅತೀ ಬುದ್ಧಿವಂತಿಕೆ ಪ್ರದರ್ಶನಕ್ಕೆ ಸಿಕ್ಕ ಅತ್ಯುನ್ನತ ಬಹುಮಾನ. ಆ ಆಸಾಮಿಯೋ ಒಂದು ಬಹು ರಾಷ್ಟ್ರೀಯ ಕಂಪನೀಲಿ ಕೆಲಸ ಮಾಡ್ತಿದ್ದ. ಒಳ್ಳೆ ಹೆಸರು ಇರೋ ಕಂಪನಿ ಅದು. ಅತೀ ಆಸೆ ಏನ್ ಮಾಡ್ತೀರ.. ಆ ಕಂಪನಿ ಬಿಟ್ಟು ಬೇರೆ ಕಡೆ ಸೇರಿದ. ಇನ್ನು ಒಂದು ವರ್ಷ ಕೂಡ ಕಳೆದಿಲ್ಲ ಆಗ್ಲೇ ಅಲ್ಲಿ ಕೂಡ ರಾಗ ಎಳೆಯೋಕೆ ಶುರು ಮಾಡಿದ. ಮತ್ತೆ ಬೇರೆ ಕಡೆ ಕೆಲಸಕ್ಕಾಗಿ ಹುಡುಕಾಟ. ಆಗ್ಲೇ ನಮ್ ಕಂಪನಿ ಇಂದ ಅವನಿಗೆ ಕಾಲ್ ಹೋಗಿದ್ದು. ಒಳ್ಳೆ ಪ್ಯಾಕೇಜ್ ಇಟ್ಕೊಂಡಿರೋ ಹುಡುಗ ಅವ್ನು. ಸರಿ ನಮ್ ಕಂಪನಿ ಲಿ ಅವನಿಗೆ ಇಂಟರ್ವ್ಯೂ ಆಯ್ತು. ಒಂದು ಶುಭ ಶುಕ್ರುವಾರ ಎಚ್ ಆರ್ ಕಾಲ್ ಮಾಡಿ ಕೂಡ ಹೇಳಿದ್ಲು ಈಗ ಆಫರ್ ರೋಲ್ ಔಟ್ ಮಾಡ್ತೀನಿ ಅಂತ. ಅವಳ ಮಾತಿನ ಮೇಲೆ 'ಅತೀ' ಭರವಸೆ ಇಟ್ಟು ಆ ಆಸಾಮಿ ಅಲ್ಲಿ ರಿಸೈನ್ ಕೂಡ ಮಾಡ್ಬಿಟ್ಟ. ಅಲ್ಲ, ನಾನು ಹೇಳೋದು, ಕೈಗೆ ಆಫರ್ ಬರೋಕೆ ಮುಂಚೆ ಈ ಬುದ್ಧಿವಂತನಿಗೆ ಏನಾಗಿತ್ತು ಅಂತ ಅರ್ಜೆಂಟು ರಿಸೈನ್ ಮಾಡೋವಂತದು? ಆಮೇಲೇನೆ ಫಜೀತಿ ಶುರು ಆಗಿದ್ದು. ಮತ್ತೆ ಇಲ್ಲಿ ಎಚ್ ಆರ್ ಇಂದ ಕರೆ 'ನಿಮ್ಮ ಪ್ಯಾಕೇಜ್ ತುಂಬ ಜಾಸ್ತಿ ಇದೆ ನಾವು ಅಷ್ಟು ಆಫರ್ ಮಾಡೋಕ್ಕಾಗಲ್ಲ ಅದಿಕ್ಕೆ ಈ ಕೆಲಸ ನಿಮಗಲ್ಲ ' ಅಂತ. ಹೇಗಾಗಿರಬೇಡ ಅವ್ನ ಫಜೀತಿ. ಅಲ್ಲಿ ರಿಸೈನ್ ಮಾಡಿಯಾಯ್ತು ಇಲ್ಲಿ ಕೆಲಸ ಇಲ್ಲ. ಪಾಪ. ಆಮೇಲೆ ಏನೋ ಮಾಡಿ ನನ್ನ ಫ್ರೆಂಡ್ ಏನೇನೋ ಐಡಿಯಾ ಕೊಟ್ಟು ಇಲ್ಲಿ ಆಫರ್ ತಗೊಂಡ.. ಈಗ ಅವ್ನು ಸೇಫ್. ಅದಿಕ್ಕೆ ಹೇಳೋದು ಆತೀ ಬುದ್ಧಿವಂತಿಕೆ ಕೆಲವು ಕಡೆ ಕೆಲಸಕ್ಕೆ ಬರಲ್ಲ.

No comments:

Post a Comment