ಬಾಲ್ಯ ಅನ್ನೋದ ಆ ತರ.... ಒಂದೊಂದು ದಿನವೂ ಒಂದೊಂದು ಸುಂದರ ಅನುಭವ ಕೊಡ್ತಾವೆ... ನನ್ನ ಬಾಲ್ಯದ ಬಗ್ಗೆ ಹೇಳ್ಬೇಕು ಅಂದ್ರೆ... ಉಫ್ ..... ನಾನು ಬೆಳೆದಿದ್ದು ಮೈಸೂರು ಬನ್ನೂರು ಓಡಾಡ್ಕೊಂಡು..... ಎಲ್ಲೆಲ್ಲು ಹಸಿರು.... ಹತ್ತು ವೆಹಿಕಲ್ಸ್ ಒಟ್ಟಿಗೆ ನಿಂತದನ್ನ ನಾನು ನೋಡ್ದೊನೆ ಅಲ್ಲ... ಇವತ್ತು ಈ ಟ್ರಾಫಿಕ್ ಈ ಜನಜಂಗುಳಿ ನಡುವೆ ಓಡಾಡ್ತಾ ಕೆಲಸ ಮಾಡ್ತಾ ಇದ್ದೀನಿ ಅಂದ್ರೆ ನಂಗೆ ಆಶ್ಚರ್ಯ ಆಗತ್ತೆ... ಜೀವನ ಎಲ್ಲಾನು ಕಲ್ಸತ್ತೆ ಅಂತಾರೆ.... ಹೀಗೆನಾ ಅದು...
ನನ್ನ ಬಾಲ್ಯ ನಾನು ಮಾಡೋ ಎಕ್ಷ್ಪೆರಿಮೆಂಟ್ಸಲ್ಲೇ ಕಳೆದೋಯ್ತು.... ನನ್ನ ಪ್ರಪಂಚ ಅಂದ್ರೆ ನಾನು, ಮಮ್ಮಿ, ಅಕ್ಕ... ಮೂರೇ ಮಂದಿ... ಅಪ್ಪ ತಿಂಗಳಿಗೋ ಎರಡು ತಿಂಗಳಿಗೋ ಬರೋರು... ಅವ್ರಿದ್ದಿದ್ದು ಕೋಲಾರ, ಮುಳುಬಾಗಿಲು, ಬಾಗಲಕೋಟೆ, ನಂಜನಗೂಡು, ಪಾಂಡವಪುರ, ಶ್ರೀನಿವಾಸಪುರ.... ಹೀಗೆ ಸಾಗತ್ತೆ ಅವ್ರ ಲಿಸ್ಟ್.... ಅದು ಬಿಡಿ... ನನ್ ಪ್ರಪಂಚದಲ್ಲಿ ನಮ್ ಮೂರೇ ಜನಕ್ಕೆ ಜಾಗ... ಅಕ್ಕನ ಜೊತೆ ಕಿತ್ತಾಡೋದು ಅಂದ್ರೆ ಬಹಳ ಖುಷಿ ನಂಗೆ.... ಅವ್ಳ ಜುಟ್ಟು ಹಿಡ್ಕೊಂಡು ಕಾರ ರುಬ್ಬೋ ಥರ ರುಬ್ತಾ ಇದ್ದೆ ನಾನು.... ಅವ್ಳು ಏನ್ ಕಮ್ಮಿ ಇರಿಲಿಲ್ಲ.... ನನ್ ಜೊತೆ ಸರಿಯಾಗೇ ಗುದ್ದಾಡ್ಥ ಇದ್ಲು ...ಅಮ್ಮ ನೋಡೋ ತನಕ ನೋಡೋರು ಆಮೇಲೆ ಇರೋದು ನಮ್ಮಿಬ್ರಿಗೂ ಸೇವಾರ್ಥ.... ಅದೆಲ್ಲ ದಿನ ನಿತ್ಯದ ಚಟುವಟಿಕೆ ಆಗ್ಬಿಟ್ಟಿತ್ತು.... ಎಷ್ಟು ಏಟು ತಿಂತಾ ಇದ್ದೆ ಗೊತ್ತ, ಅದರೂ ತುಂಬ ಆಕ್ಟಿವ್ ಇರ್ತಿದ್ದೆ... ಈಗ ನೋಡಿ... ಮಾಡೋದು ಕಂಪ್ಯೂಟರ್ ಮುಂದೆ ಕೂತು ಕೆಲಸ... ಏನೋ ಘನಂದಾರಿ ಮಣ್ಣು ಹೊರೋನ ಥರ ಸ್ಕೋಪ್ ನಂಗೆ... ಮನೆಗೆ ಹೋದಮೇಲೆ ಅಮ್ಮನ ಮೇಲೆ ಇರೋ ಬರೋ ಸಿಟ್ಟೆಲ್ಲ ಹೋಗತ್ತೆ.... ಜೀವನಾನ ಎಷ್ಟು ಬದ್ಲಾಯಿಸ್ಕೊತೀವಲ್ಲ.....ಆದ್ರೆ ಅಮ್ಮ ಮಾತ್ರ ಅದೇ ಅಮ್ಮ.... ಆರಕ್ಕೆ ಹಿಗ್ಗದೆ ಮೂರಕ್ಕೆ ಕುಗ್ಗದೆ ಇರೋ ಅಮ್ಮ.... ಅವ್ರ ರೀತಿ ನಾವ್ಯಾಕೆ ಆಗ್ಲಿಲ್ಲ....
ನಂಗೆ ಆಗ ಆರೋ ಏಳೋ ವರ್ಷ.... ಬೆಳಿಗ್ಗೆ ಮನೆ ತೊಟ್ಟಿಗೆ ನೀರು ತುಂಬಿಸೋ ಕೆಲಸ ನಂದು.... ಆಚೆ ಬರ್ತಾ ಇತ್ತು ನೀರು... ಮನೇಲಿ ನಲ್ಲಿ ಇರ್ಲಿಲ್ಲ.... ತೊಟ್ಟಿಗೆ ನೀರು ತುಂಬ್ಸಿ ಸ್ನಾನ ಮಾಡ್ತಾ ಇದ್ದೆ.... ಆಚೆ ಅಮ್ಮ ಯಾರ್ ಜೊತೆನೋ ಜಗಳ ಆಡೋ ಶಬ್ದ ಕೇಳಿಸ್ತು... ಆಮೇಲೆ ತಿಳೀತು ಮನೆ ಮುಂದೆ ಇದ್ದ ತುಳುಸಿ ಗಿಡ ಕಿತ್ತೋಗಿದೆ.... ಅಮ್ಮ ಪಕ್ಕದ ಮನೆಯವರ ಹತ್ರ ಜಗಳ ಮಾಡ್ತಾ ಇದ್ರು ನೀವೇ ಮಾಡಿರೋದು ಅಂತ... ಅದು ಹೇಗೆ ಬಂದು ನಂಗೆ ಸಿಕ್ಕೊಂತೋ ಗೊತ್ತಿಲ್ಲ... ಪಕ್ಕದ ಮನೆಯವರು ಹೇಳಿದ್ರಂತೆ ನಿಮ್ಮ ಮಗನೆ ಕಿತ್ತಿದ್ದು.... ನೀರು ತುಂಬೋ ವಾಗ ನೋಡ್ದೆ ಅಂಥ.... ಅಮ್ಮಂಗೆ ಎಲ್ಲಿಲ್ಲದ ಕೋಪ ಬಂತು.... ಸೀದಾ ಬಂದೋರೆ ಒಲೆಲಿ ಸೌದೆ ಉರಿತಾ ಇತ್ತು ನೀರು ಕಾಯ್ಸೋಕೆ... ತೆಗದು ನನ್ ಕಾಲಲ್ಲಿ ಎರಡು ಕಡೆ ಸುಟ್ಟಿದ್ರು.... ನಾನು ಎಷ್ಟು ಹೇಳಿದ್ರು ಕೇಳಲೇ ಇಲ್ಲ... ಒಂದೇ ಹಠ ಅಮ್ಮನದು... ನೀನೆ ಮಾಡಿರೋದು ಪಕ್ಕದ ಮನೆಯವರು ಹೇಳಿದ್ರು ಅಂತ... ಸೀಮೆಎಣ್ಣೆ ಹಾಕೊಂಡು ಮೈ ಸುಟ್ಟುಕೊಂಡ್ರೆ ಹೇಗೆ ಅಂತ ಆಗ ತಿಳೀತು... ಎಷ್ಟು ಭಯಾನಕ ಅಲ್ವ ಅದು... ಮೂರು ವಾರ
ಬೇಕಾಯ್ತು ಗಾಯ ವಾಸಿ ಆಗೋಕೆ... ಅಮ್ಮ ಆ ರೀತಿನೆ.... ಯಾರಾದ್ರೂ ನಮ್ಮ ಕಡೆ ಬೆರಳು ಮಾಡಿ ತೋರ್ಸಿದ್ರೆ ಸಕ್ಕತ್ ಕೋಪ ಅಮ್ಮಂಗೆ... ಬಹುಷಃ ಆ ರೀತಿ ಅಮ್ಮ ಇದ್ದದಕ್ಕೋ ಏನೋ ಇವತ್ತು ನಾನು ಈ ಸ್ಟೇಜ್ ಗೆ ಬಂದಿದೀನಿ...

ರಾಮಾಯಣ ಮಹಾಭಾರತ ಬರ್ತಾ ಇದ್ದ ಟೈಮ್ ಅದು.... ನಂಗೆ ಮನೆ ಮುಂದೆ ಬಿದ್ದಿರ್ತ ಇದ್ದ ನೀಲಗಿರಿ ಕಡ್ದಿನೆ ಗಧೆ ಪೊರಕೆ ಕಡ್ಡಿ ಇಂದ ಮಾಡಿದ ಬಿಲ್ಲು ಬಾಣ, ಇವೆರಡು ಇದ್ರೆ ಆಯಿತು ಟೈಮ್ ಹೋಗೋದೇ ತಿಳಿತ ಇರ್ಲಿಲ್ಲ.... ಒಂದು ಸರಿ ಮನೆ ಪಕ್ಕ ನಮ್ಮ ರಿಲೆಟಿವ್ ಹುಡುಗ ಒಬ್ಬಂಗೆ ಗುರಿ ಇತ್ತು ಬಾಣ ಬಿಟ್ಟಿದ್ದೆ, ಅದು ಹೋಗಿ ಅವ್ನ ಕಣ್ಣಿನ ಪಕ್ಕ ಸಿಕ್ಕಿ ಹಾಕ್ಕೊಂಡು ಬಿಡ್ತು.... ಅಯ್ಯೋ ಆ ಪಜೀತಿ ಬೇಡ... ಅಮ್ಮಂಗು ಅವ್ರಮ್ಮಂಗು ದೊಡ್ಡ ಜಗಳ.... ಮತ್ತೆ ಮನೇಲಿ ನಂಗೆ ಸೇವಾರ್ಥ.... ಒಟ್ನಲ್ಲಿ ಅದು ಇದು ಮಾಡೋದು ಮನೇಲಿ ಏಟು ತಿನ್ನೋದು ಇದೆ ಆಗಿತ್ತು ನನ್ ದಿನಚರಿ...
ಇನ್ನು ತುಂಬಾ ಇದೆ ನಿಮ್ ಹತ್ರ ಮಾತಾಡೋದು.... ಆದ್ರೆ ಸದ್ಯಕ್ಕೆ ಹೋಗಿ ಬರ್ತೀನಿ... ಬರಲಾ....
-ಮಲ್ಲಿ....
geleya... the theete malla...
ReplyDeleteninna kaalu sutta kathe nange hel le illa...
ninna nodidre.. istondu theete huduga anisolla valla..
mathe ninna cheste galanna. next yavaga hodbahudu... :)
next version release madteeni iru putta... innu thumba ide kathe... ;)
ReplyDelete